Sunday, September 26, 2021

ಭರತ್ ಬಂದ: ದೇಶಾದ್ಯಂತ ರೈತರ ಪ್ರತಿಭಟನೆ.

 ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಸೆ.೨೭) ಕರೆ ನೀಡಿರುವ ' ಭರತ್ ಬಂದ್' ಗೆ ರಾಜ್ಯದಲ್ಲಿ ಹಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದ್ದು, ರೈತ ಸಂಘಟೆನಗಳು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಯನ್ನು ಆಯೋಜಿಸಿವೆ.

ಜಿಲ್ಲಾ ಕೇಂದ್ರಗಳು ಹಾಗು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲೂ ಪ್ರತಿಭಟನೆಯನ್ನು  ಆಯೋಜಿಸಲು ಉದ್ದೇಶಿಸಿವೆ.

ಕಾಂಗ್ರೆಸ್ ಮತ್ತು ಜೆಡಿಏಸ್ ಪಕ್ಷಗಳು ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿವೆ.

ರಾಜ್ಯದಲ್ಲಿ ಶಾಲಾ ಕಾಲೇಜುಗಳು ,ಅಂಗಡಿ ಮುಂಗಟ್ಟು,ಸಾರಿಗೆ ಸೇವೆ ಸೇರಿದಂತೆ ಎಲ್ಲ ಅಗತ್ಯ ಸೇವೆಗಳು ಎಂದಿನಂತೆ ಇರಲಿವೆ.

ಕೃಪೆ. ಪ್ರಜಾವಾಣಿ 

Friday, September 24, 2021

UPSC results 2020: ಶುಭಂ ಕುಮಾರ್ ಪ್ರಥಮ ಸ್ಥಾನ

ಕೇಂದ್ರ ಲೋಕಸೇವಾ ಆಯೋಗವು ೨೦೨೦ ರ ನಾಗರಿಕ್ ಮುಖ್ಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.

ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತಕ್ಕೆ ಶುಭಮ್ ಕುಮಾರ್ ಅವರು ಪ್ರಥಮ್ ಸ್ಥಾನ ಗಳಿಸಿದ್ದಾರೆ. ಜಾಗೃತಿ ಅವಸ್ತಿ ಅವರು ಎರಡು ಮತ್ತು ಅಂಕಿತ ಜೈನ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ನೇಮಕಾತಿಗೆ ಶಿಫಾರಸ್ಸು ಮಾಡಲಾಗಿರುವ ಒಟ್ಟು 761 ಅಭ್ಯರ್ಥಿಗಳ ಪೈಕಿ 545 ಮಂದಿ ಪುರುಷರಾಗಿದ್ದರೆ ಮತ್ತು 216 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದರೆ. 

ಕೃಪೆ : ಪ್ರಜಾವಾಣಿ 

Thursday, September 23, 2021

ಅಕ್ಟೋಬರ್ ನಲ್ಲಿ ನೌಕರರಿಗೆ ರಜೆಯೊ ರಜೆ

 ಅಕ್ಟೋಬರ್ ನಲ್ಲಿ ನೌಕರರಿಗೆ ಅದರಲ್ಲೂ ಸರಕಾರಿ ನೌಕರರಿಗೆ ಹೆಚ್ಜು ರಜೆ ಸಿಗಲಿದೆ. ಬರೊಬ್ಬರಿ ೧೦ ದಿನಗಳ ಕಾಲ ರಜೆ ಸಿಗಲಿದೆ. ಈ ತಿಂಗಳಲ್ಲಿ ಬ್ಯಾಂಕ್ ಸೆರಿದಂತೆ ಹಲವು ಕಚೇರಿಗಳಿಗೆ ರಜೆ ಇರುತ್ತದೆ. ಹೀಗಾಗಿ ಮುಂಗಡವಾಗಿ ಜನರು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕಾಗುತ್ತದೆ. ಅಕ್ಟೋಬರ್ ೨ ಗಾಂಧಿ ಜಯಂತಿಯಿಂದ ರಜೆಗಳು ಆರಂಭ ಆಗಲಿವೆ. ಅಕ್ಟೋಬರ್ ೩ ( ಭಾನುವಾರ), ಅಕ್ಟೋಬರ್ ೯ ( ೨ ನೆ ಶನಿವಾರ) ಅಕ್ಟೋಬರ್ ೧೦ (ಭಾನುವಾರ), ಅಕ್ಟೋಬರ್ ೧೪ (ಗುರುವಾರ) ಆಯುಧ ಪೂಜಾ, ವಹಾನವಮಿ , ಅಕ್ಟೋಬರ್ ೧೫ ( ಶುಕ್ರವಾರ) ದಸರಾ, ಅಕ್ಟೋಬರ್ ೧೭ ( ಭಾನುವಾರ), ಅಕ್ಟೋಬರ್ ೧೮ ( ಸೋಮವಾರ) ಈದ್-ಎ-ಮಿಲನ್  , ಅಕ್ಟೋಬರ್ ೨೩ ( ನಾಲ್ಕನೆ ಶನಿವಾರ) , ಅಕ್ಟೋಬರ್ ೨೪ ( ಭಾನುವಾರ), ಹೀಗೆ ಸರಣಿ ರಜೆಗಳು ಎದುರಾಗುತ್ತಿರುವುದು ವಿಶೇಷ..


Wednesday, September 15, 2021

ಪ್ರೀತಿ ಗೀತಿ ಇತ್ತ್ಯಾದಿ

 ಮುಂದುವರಿದ ಭಾಗ

ಕನ್ನಡಿ ಮುಂದೆ ಕಮಲಾಕ್ಷಿ ಇನ್ನು ರೆಡಿ ಆಗುತ್ತಲೆ ಸಂಜು ಕಡೆ ಕನ್ನಡಿಯ ಪ್ರತಿಬಿಂಬದಲ್ಲಿ ನೋಡಿ ನಸು ನಕ್ಕು ಹಣಿ ಮೇಲೆ ಕೆಂಪು ಚುಕ್ಕಿ ಇಟ್ಟುಕೊಂಡಳು. ಅಮ್ಮ ಅವಳ ಟಿಫಿನ್ ಬಾಕ್ಸ ಗೆ ಉಪ್ಪಿಟ್ಟು ಹಾಕಿಕೊಂಡು ಎಷ್ಟೊತ್ತು ರೆಡಿ ಆಗ್ತಿ ಕನ್ನಡಿ ಮುಂದೆ ನಿಂತು ತಾಸು ಆತು ಕಾಲೇಜ್ ಗೆ ಹೊಗತಿಯೊ ಇಲ್ಲೋ ಎಂದು ಗದರಿಸಿದಳು ಆಗ ಕಮಲಾ ಹಾ ಅಮ್ಮ ಹೊರಟೆ ಎಂದಳು. ಅಷ್ಟರಲ್ಲಿ ಗೆಳತಿ ನೀಲಾ ಬಂದು ಹೋರಗೆ ಕಾಯುತ್ತಿದ್ದಳು. ಪಾಟೀಲ ರು ಹೊರಗಿಂದಾನೆ ಕಮಲಾ ನೀಲಾ ಬಂದು ಎಷೊತ್ತಾಯಿತು ಬೇಗ ಹೋಗ ಬಾ ಎಂದಾಗ ಸಂಜಯ ಗೆ ಎಲ್ಲಿಲ್ಲದ ಕೋಪ ಬಂದು ಮನೆ ಹೊರ ಬಂದು ನೀಲಾ ನನ್ನೆ ಗುರಾಯಿಸುತ್ತಾ ನಿಂತನು. ಇವತ್ತಾದರು ಕಮಲಾ ನ ಮಾತಡಿಸೊನಾ ಅಂದುಕೊಂಡಿದ್ದ ಸಂಜಯ ಗೆ ನಿರಾಸೆ ಉಂಟು ಮಾಡಿತ್ತು. ನೀಲಾ ಗೆ ಕನ್ನ ಸಣ್ಣೆಯಲ್ಲೆ ಮನ ಬಂದಂತೆ ಬೈಯುತ್ತಾ ನಿಂತ್ತಿದ್ದಾ, ಒಳಗಿಂದಾ ಕಮಲಾಕ್ಷಿ ನಗುತ್ತಾ ಬಂದು ಅಪ್ಪ ನಾ ಕಾಲೇಜ್ ಗೇ ಹೋಗುತ್ತೇನೆ ಎಂದು ಪಾಟೀಲ ರ ಕಾಲಿಗಿ ನಮಸ್ಕರಿಸಿ ಹೊಗುವಾಗ ಸಂಜು ಕಡೆ ವಾರೆ ನೋಟ ಬೀರಿ ಅವನ ಮನಸಿನ ತುಮಲವನ್ನು ನೋಡದೆ ಮೊಗದಲ್ಲಿ ಮಂದಹಾಸದ ನಗುವಿನೊಂದಿಗೆ ನೀಲಾ ಜೊತೆಗೆ ಕಾಲೇಜ್ ಕಡೆ ಹೊರಟಳು. ಇತ್ತ ಅವಳು ಹೊಗುವದನ್ನೆ ನೋಡುತ್ತ ನಂತ್ತಿದ್ದ ಸಂಜಯನನ್ನು ಪಾಟೀಲರು ಎ ಸಂಜ್ಯಾ ಯಾಕ ಗರ ಬಡದವರ ತರಾ ನಂತಿ ಬಾ ಇಲ್ಲಿ ಎಂದರು . ಸಂಜಯ ಗೆ ತಳಮಳ ಶುರು ಆಯಿತು ಎಲ್ಲಿ ಪಾಟೀಲರ ಗೆ ಕಮಲಾ ಮೇಲಿನ ಪ್ರೀತಿ ಬಗ್ಗೆ ಗೊತ್ತಾಯಿತಾ ಹೇಗೆ ಎಂದು ಮನಸಲ್ಲೆ ನೂರು ವಿಚಾರ ಮಾಡುತ್ತಾ, ಭಯದಲ್ಲಿ ಎನ್ ಅಂತಾರೊ ಎಂದುಕೊಳ್ಳುತ್ತಾ ಅವರ ಹತ್ತಿರ ಹೋಗಿ ನಿಂತನು. 

ಮುಂದುವರಿಯುವುದು.....


Tuesday, September 14, 2021

ಪ್ರೀತಿ ಗೀತಿ ಇತ್ತ್ಯಾದಿ

 ಸೂರ್ಯ ನು ಉದಯಿಸುವ ಸಮಯ ಅದಾಗಲೇ ಸಂಜಯ ಎದ್ದು ತಾನೆ ಮಾಡಿದ ಚಹಾವನ್ನು ಮನದಲ್ಲಿ ಎನೊ ಗುನಗುನುಸುತಾ ಎಲ್ಲೊ ಹೋಗಬೇಕೆಂದವನು ಮರೆತು ನೆನಪಿಸಿಕೊಳ್ಳುತ್ತಾ ತುಂಬಾ ಸುಡುವ ಚಹಾವನ್ನು ಕುಡಿಯುತ್ತಾ ಆ ಕಡೆಯಿಂದಾ ಇ ಕಡೆ ಈ ಕಡೆಯಂದಾ ಆ ಕಡೆ ಪರಿತಪಿಸುತ್ತಿರುವಾಗ, ಅಮ್ಮ ಎದ್ದು ಅಂಗಳದಲ್ಲಿನ ಕಸ ಗೂಡಿಸಿ ನೀರು ಹಾಕಿ ರಂಗೋಲೆ ಬಿಡಿಸಿ ಈ ಸಂಜ್ಯಾ ಗ ಎನಾಗಿದ್ದಾತು ಎಷ್ಟು ಸಾರಿ ಹೇಳಬೇಕು ಆ ಪಾಟೀಲ ಸಹುಕಾರ ಮನಿಗೆ ಹೋಗಿ ಹಾಲ ಹಾಕಿ ಬಾ ಅಂತಾ ಮೃ ಮೇಲೆ ಕಬರ ಇಲ್ಲ ಇವನಿಗಿ’ ಎಂದು ಬೄಯುತ್ತಾ ಒಳಗೆ ಬರುವದನ್ನು ತಿಳಿದ ಸಂಜಯ ಅವಸರ ದಿಂದ ಹಾಲಿನ ಕ್ಯಾನ್ ನ್ನು ತೆಗೆದುಕೊಂಡು ಸ್ಕೂಟಿಯನ್ನು ಸ್ಟಾಟ೯ ಮಾಡಿದ ಇನ್ನೆನು ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಕರೆದು ಹಿತ್ತಲದಲ್ಲಿನ ಮಲ್ಲಿಗೆ ಹೂ ತಂದು ಸಾಹುಕಾರ ಮಗಳಿಗೆ ಕೊಡು ಎಂದರು. ಹೂ ನೋಡಿ ಸಂಜಯ ಮುಖದಲ್ಲಿ ಮುಗುಳು ನಗುತ್ತಾ ಅಲ್ಲೆ ನಿಂತನು. ಅಮ್ಮ ಇನ್ನು ಹೋಗಲಿಲ್ಲೆನ್ಲಾ ಎಂದು ಕೂಗಿದಳು ಅವಾಗ ಮತ್ತೆ ಗುನುಗುನುತ್ತಾ ಪಾಟೀಲರ ಮನೆ ಕಡಿ ಸಾಗಿದಾ ದಾರಿಯುದ್ದಕ್ಕೂ ಪಾಟಿಲರ ಮಗಳ ಸೌಂದಯ೯ ವನ್ನು ನೆನೆಯುತಾ ನೋಡುವ ತವಕದಲ್ಲಿ ರೇಸ್ ಜಾಸ್ತಿ ಮಾಡಿದ ಪಾಟೀಲರು ಮನೆ ಬಂಕದ ಕಟ್ಟಿ ಮೇಲೆ ಕೂತು ಕೆಲಸಗಾರ ಯಲ್ಲಪ್ಪ ನಿಗ ೆ ಹಿಗ್ಗಾ ಮುಗ್ಗಾ ಬೈಯುವದನ್ನು ಕಂಡು ನಿದಾನವಾಗಿ ಸ್ಕೂಟಿಯ ಸ್ಟ್ಯಾಂಡ ಹಾಕಿ ಹಾಲಿನ ಕ್ಯಾನ್ ನ್ನು ತೆಗೆದುಕೂಂಡು ಒಳ ನೆಡೆದನು. ಅಷ್ಟರಲ್ಲಿ ಸೌಂದಯ೯ವೆ ನಾಚುವಷ್ಟು ಆಗ ತಾನೆ ಕರೆದ ಹಾಲಿನಂತೆ ಬೆಳ್ಳನೆ ಮೈ ಬಣ್ಣ, ಎತ್ತರದ ನಿಲುವು, ಅಗಲವಾದ ಕಣ್ಣು, ಎಳೆಯ ನೂಲಿನಂತೆ ಉದ್ದನೆಯ ಜಡೆ ಹಾಕಿದ ಕೂದಲು ಬಾಚುತ್ತ ಕನ್ನಡಿಯೆ ನಾಚಿ ನಿರಂತಾಗುತ್ತೇನೊ ಅನ್ನುವಷ್ಟು ರ ಮಟ್ಟಿಗೆ ಅದರ ಮುಂದೆ ನಿಂತು ಕಾಲೆಜ್ಗೆ ಹೋಗಲು ರೆಡಿ ಆಗುತ್ತಿದ್ದಳು. ಸಂಜಯ ಅವಳನ್ನೆ ನೊಡುತಾ ಮನದ ಮುಗಿಲಲ್ಲಿ ಕವನ ರಚಿಸುತಾ ಪ್ರೇಮ ನಿವೇದನೆ ಮಾಡತ್ತ ಕಂಬಕ್ಕೇ ಒರಗಿ ನಿಂತಿರಲು ಮನೆಯ ಒಡತಿ ಬಂದು ಎಷ್ಟೊತ್ಲಾ ಬರೊದು ಮನೆಯಲ್ಲಿ ಹಾಲು ಇಲ್ಲದೆ ನೊಡಲ್ಲಿ ಸಾಹುಕಾರರು ಚಹಾ ನು ಕುಡಿದೆ ಹೇಗೆ ಪಿತ್ತ ನೆತ್ತಿಗೆರಿಸಿಕೊಂಡು ಯಲ್ಲಪ್ಪನಿಗೆ ಬೈತಿದಾರೆ ಅಂತ ಹೆಳುತ್ತಾ ಕ್ಯಾನನ್ನು ತೆಗೆದುಕೊಂಡು ಹೊಗಳು..ಇತ್ತ ಸಂಜಯ ಗೆ ಅದರ ಪರಿವಿಲ್ಲದೆ ಕನ್ನಡಿ ಮುಂದೆ ಕಮಲದಂತೆ ಅರಳಿದ ಕಮಲಾಕ್ಷಿಯನ್ನು ನೋಡುತ ನಿಂತಿದ್ದನು. 

ಮುಂದುವರೆಯುವುದು...........

ಭರತ್ ಬಂದ: ದೇಶಾದ್ಯಂತ ರೈತರ ಪ್ರತಿಭಟನೆ.

 ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಸೆ.೨೭) ಕರೆ ನೀಡಿರುವ ' ಭರತ್ ಬಂದ್' ಗೆ ರಾಜ್ಯದಲ್ಲಿ ಹಲವು ಸಂಘ...