ಸೂರ್ಯ ನು ಉದಯಿಸುವ ಸಮಯ ಅದಾಗಲೇ ಸಂಜಯ ಎದ್ದು ತಾನೆ ಮಾಡಿದ ಚಹಾವನ್ನು ಮನದಲ್ಲಿ ಎನೊ ಗುನಗುನುಸುತಾ ಎಲ್ಲೊ ಹೋಗಬೇಕೆಂದವನು ಮರೆತು ನೆನಪಿಸಿಕೊಳ್ಳುತ್ತಾ ತುಂಬಾ ಸುಡುವ ಚಹಾವನ್ನು ಕುಡಿಯುತ್ತಾ ಆ ಕಡೆಯಿಂದಾ ಇ ಕಡೆ ಈ ಕಡೆಯಂದಾ ಆ ಕಡೆ ಪರಿತಪಿಸುತ್ತಿರುವಾಗ, ಅಮ್ಮ ಎದ್ದು ಅಂಗಳದಲ್ಲಿನ ಕಸ ಗೂಡಿಸಿ ನೀರು ಹಾಕಿ ರಂಗೋಲೆ ಬಿಡಿಸಿ ಈ ಸಂಜ್ಯಾ ಗ ಎನಾಗಿದ್ದಾತು ಎಷ್ಟು ಸಾರಿ ಹೇಳಬೇಕು ಆ ಪಾಟೀಲ ಸಹುಕಾರ ಮನಿಗೆ ಹೋಗಿ ಹಾಲ ಹಾಕಿ ಬಾ ಅಂತಾ ಮೃ ಮೇಲೆ ಕಬರ ಇಲ್ಲ ಇವನಿಗಿ’ ಎಂದು ಬೄಯುತ್ತಾ ಒಳಗೆ ಬರುವದನ್ನು ತಿಳಿದ ಸಂಜಯ ಅವಸರ ದಿಂದ ಹಾಲಿನ ಕ್ಯಾನ್ ನ್ನು ತೆಗೆದುಕೊಂಡು ಸ್ಕೂಟಿಯನ್ನು ಸ್ಟಾಟ೯ ಮಾಡಿದ ಇನ್ನೆನು ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಕರೆದು ಹಿತ್ತಲದಲ್ಲಿನ ಮಲ್ಲಿಗೆ ಹೂ ತಂದು ಸಾಹುಕಾರ ಮಗಳಿಗೆ ಕೊಡು ಎಂದರು. ಹೂ ನೋಡಿ ಸಂಜಯ ಮುಖದಲ್ಲಿ ಮುಗುಳು ನಗುತ್ತಾ ಅಲ್ಲೆ ನಿಂತನು. ಅಮ್ಮ ಇನ್ನು ಹೋಗಲಿಲ್ಲೆನ್ಲಾ ಎಂದು ಕೂಗಿದಳು ಅವಾಗ ಮತ್ತೆ ಗುನುಗುನುತ್ತಾ ಪಾಟೀಲರ ಮನೆ ಕಡಿ ಸಾಗಿದಾ ದಾರಿಯುದ್ದಕ್ಕೂ ಪಾಟಿಲರ ಮಗಳ ಸೌಂದಯ೯ ವನ್ನು ನೆನೆಯುತಾ ನೋಡುವ ತವಕದಲ್ಲಿ ರೇಸ್ ಜಾಸ್ತಿ ಮಾಡಿದ ಪಾಟೀಲರು ಮನೆ ಬಂಕದ ಕಟ್ಟಿ ಮೇಲೆ ಕೂತು ಕೆಲಸಗಾರ ಯಲ್ಲಪ್ಪ ನಿಗ ೆ ಹಿಗ್ಗಾ ಮುಗ್ಗಾ ಬೈಯುವದನ್ನು ಕಂಡು ನಿದಾನವಾಗಿ ಸ್ಕೂಟಿಯ ಸ್ಟ್ಯಾಂಡ ಹಾಕಿ ಹಾಲಿನ ಕ್ಯಾನ್ ನ್ನು ತೆಗೆದುಕೂಂಡು ಒಳ ನೆಡೆದನು. ಅಷ್ಟರಲ್ಲಿ ಸೌಂದಯ೯ವೆ ನಾಚುವಷ್ಟು ಆಗ ತಾನೆ ಕರೆದ ಹಾಲಿನಂತೆ ಬೆಳ್ಳನೆ ಮೈ ಬಣ್ಣ, ಎತ್ತರದ ನಿಲುವು, ಅಗಲವಾದ ಕಣ್ಣು, ಎಳೆಯ ನೂಲಿನಂತೆ ಉದ್ದನೆಯ ಜಡೆ ಹಾಕಿದ ಕೂದಲು ಬಾಚುತ್ತ ಕನ್ನಡಿಯೆ ನಾಚಿ ನಿರಂತಾಗುತ್ತೇನೊ ಅನ್ನುವಷ್ಟು ರ ಮಟ್ಟಿಗೆ ಅದರ ಮುಂದೆ ನಿಂತು ಕಾಲೆಜ್ಗೆ ಹೋಗಲು ರೆಡಿ ಆಗುತ್ತಿದ್ದಳು. ಸಂಜಯ ಅವಳನ್ನೆ ನೊಡುತಾ ಮನದ ಮುಗಿಲಲ್ಲಿ ಕವನ ರಚಿಸುತಾ ಪ್ರೇಮ ನಿವೇದನೆ ಮಾಡತ್ತ ಕಂಬಕ್ಕೇ ಒರಗಿ ನಿಂತಿರಲು ಮನೆಯ ಒಡತಿ ಬಂದು ಎಷ್ಟೊತ್ಲಾ ಬರೊದು ಮನೆಯಲ್ಲಿ ಹಾಲು ಇಲ್ಲದೆ ನೊಡಲ್ಲಿ ಸಾಹುಕಾರರು ಚಹಾ ನು ಕುಡಿದೆ ಹೇಗೆ ಪಿತ್ತ ನೆತ್ತಿಗೆರಿಸಿಕೊಂಡು ಯಲ್ಲಪ್ಪನಿಗೆ ಬೈತಿದಾರೆ ಅಂತ ಹೆಳುತ್ತಾ ಕ್ಯಾನನ್ನು ತೆಗೆದುಕೊಂಡು ಹೊಗಳು..ಇತ್ತ ಸಂಜಯ ಗೆ ಅದರ ಪರಿವಿಲ್ಲದೆ ಕನ್ನಡಿ ಮುಂದೆ ಕಮಲದಂತೆ ಅರಳಿದ ಕಮಲಾಕ್ಷಿಯನ್ನು ನೋಡುತ ನಿಂತಿದ್ದನು.
ಮುಂದುವರೆಯುವುದು...........
No comments:
Post a Comment