Wednesday, September 15, 2021

ಪ್ರೀತಿ ಗೀತಿ ಇತ್ತ್ಯಾದಿ

 ಮುಂದುವರಿದ ಭಾಗ

ಕನ್ನಡಿ ಮುಂದೆ ಕಮಲಾಕ್ಷಿ ಇನ್ನು ರೆಡಿ ಆಗುತ್ತಲೆ ಸಂಜು ಕಡೆ ಕನ್ನಡಿಯ ಪ್ರತಿಬಿಂಬದಲ್ಲಿ ನೋಡಿ ನಸು ನಕ್ಕು ಹಣಿ ಮೇಲೆ ಕೆಂಪು ಚುಕ್ಕಿ ಇಟ್ಟುಕೊಂಡಳು. ಅಮ್ಮ ಅವಳ ಟಿಫಿನ್ ಬಾಕ್ಸ ಗೆ ಉಪ್ಪಿಟ್ಟು ಹಾಕಿಕೊಂಡು ಎಷ್ಟೊತ್ತು ರೆಡಿ ಆಗ್ತಿ ಕನ್ನಡಿ ಮುಂದೆ ನಿಂತು ತಾಸು ಆತು ಕಾಲೇಜ್ ಗೆ ಹೊಗತಿಯೊ ಇಲ್ಲೋ ಎಂದು ಗದರಿಸಿದಳು ಆಗ ಕಮಲಾ ಹಾ ಅಮ್ಮ ಹೊರಟೆ ಎಂದಳು. ಅಷ್ಟರಲ್ಲಿ ಗೆಳತಿ ನೀಲಾ ಬಂದು ಹೋರಗೆ ಕಾಯುತ್ತಿದ್ದಳು. ಪಾಟೀಲ ರು ಹೊರಗಿಂದಾನೆ ಕಮಲಾ ನೀಲಾ ಬಂದು ಎಷೊತ್ತಾಯಿತು ಬೇಗ ಹೋಗ ಬಾ ಎಂದಾಗ ಸಂಜಯ ಗೆ ಎಲ್ಲಿಲ್ಲದ ಕೋಪ ಬಂದು ಮನೆ ಹೊರ ಬಂದು ನೀಲಾ ನನ್ನೆ ಗುರಾಯಿಸುತ್ತಾ ನಿಂತನು. ಇವತ್ತಾದರು ಕಮಲಾ ನ ಮಾತಡಿಸೊನಾ ಅಂದುಕೊಂಡಿದ್ದ ಸಂಜಯ ಗೆ ನಿರಾಸೆ ಉಂಟು ಮಾಡಿತ್ತು. ನೀಲಾ ಗೆ ಕನ್ನ ಸಣ್ಣೆಯಲ್ಲೆ ಮನ ಬಂದಂತೆ ಬೈಯುತ್ತಾ ನಿಂತ್ತಿದ್ದಾ, ಒಳಗಿಂದಾ ಕಮಲಾಕ್ಷಿ ನಗುತ್ತಾ ಬಂದು ಅಪ್ಪ ನಾ ಕಾಲೇಜ್ ಗೇ ಹೋಗುತ್ತೇನೆ ಎಂದು ಪಾಟೀಲ ರ ಕಾಲಿಗಿ ನಮಸ್ಕರಿಸಿ ಹೊಗುವಾಗ ಸಂಜು ಕಡೆ ವಾರೆ ನೋಟ ಬೀರಿ ಅವನ ಮನಸಿನ ತುಮಲವನ್ನು ನೋಡದೆ ಮೊಗದಲ್ಲಿ ಮಂದಹಾಸದ ನಗುವಿನೊಂದಿಗೆ ನೀಲಾ ಜೊತೆಗೆ ಕಾಲೇಜ್ ಕಡೆ ಹೊರಟಳು. ಇತ್ತ ಅವಳು ಹೊಗುವದನ್ನೆ ನೋಡುತ್ತ ನಂತ್ತಿದ್ದ ಸಂಜಯನನ್ನು ಪಾಟೀಲರು ಎ ಸಂಜ್ಯಾ ಯಾಕ ಗರ ಬಡದವರ ತರಾ ನಂತಿ ಬಾ ಇಲ್ಲಿ ಎಂದರು . ಸಂಜಯ ಗೆ ತಳಮಳ ಶುರು ಆಯಿತು ಎಲ್ಲಿ ಪಾಟೀಲರ ಗೆ ಕಮಲಾ ಮೇಲಿನ ಪ್ರೀತಿ ಬಗ್ಗೆ ಗೊತ್ತಾಯಿತಾ ಹೇಗೆ ಎಂದು ಮನಸಲ್ಲೆ ನೂರು ವಿಚಾರ ಮಾಡುತ್ತಾ, ಭಯದಲ್ಲಿ ಎನ್ ಅಂತಾರೊ ಎಂದುಕೊಳ್ಳುತ್ತಾ ಅವರ ಹತ್ತಿರ ಹೋಗಿ ನಿಂತನು. 

ಮುಂದುವರಿಯುವುದು.....


No comments:

Post a Comment

ಭರತ್ ಬಂದ: ದೇಶಾದ್ಯಂತ ರೈತರ ಪ್ರತಿಭಟನೆ.

 ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಸೆ.೨೭) ಕರೆ ನೀಡಿರುವ ' ಭರತ್ ಬಂದ್' ಗೆ ರಾಜ್ಯದಲ್ಲಿ ಹಲವು ಸಂಘ...